
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ಸ್ನಾತಕ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ತಾಂತ್ರಿಕಾ ಶಿಕ್ಷಣ ಕೋರ್ಸಗಳ ಪರಿಷ್ಕೃತ ಸೀಟ್ ಮೆಟ್ರಿಕ್ಸ್‌ನಲ್ಲಿ ಉಲ್ಲೇಖಿತ-1 ಆದೇಶದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ 3365 ಸೀಟ್‌ಗಳು ಮತ್ತು ದಂತ ವೈದ್ಯಕೀಯಕ್ಕೆ 1738 ಸೀಟ್‌ಗಳು ಹಾಗೂ ತಾಂತ್ರಿಕ ಶಿಕ್ಷಣಕ್ಕೆ ವಿವಿಧ ಕೋರ್ಸ್‌ಗಳನ್ನೊಳಗೊಂಡು ಸಾವಿರಾರು ಸೀಟ್‌ಗಳಿದ್ದು, ಮಾನ್ಯ ಘನ ಸರ್ಕಾರವು ಆದೇಶ ಹೊರಡಿಸುವಾಗ ಮಾಜಿ ಸೈನಿಕರ ಮತ್ತು ಸೈನಿಕರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ಕೇವಲ 6 ಸೀಟುಗಳನ್ನು ಹಂಚಿಕೆ ಮಾಡಿದ್ದು ಮತ್ತು ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ಕೇವಲ 6 ಸೀಟುಗಳನ್ನು ಹಂಚಿಕೆ ಮಾಡಿದ್ದು ಮತ್ತು ತಾಂತ್ರಿಕ ಶಿಕ್ಷಣಕ್ಕೆ ಕೇವಲ 64 ಸೀಟುಗಳು ಹಂಚಿಕೆಯಾಗಿರುವುದರಿಂದ ಮಾಜಿ ಸೈನಿಕರ ಮತ್ತು ಸೈನಿಕರ ಮಕ್ಕಳಿಗೆ ಸಂಪೂರ್ಣ ಅನ್ಯಾಯವಾಗಿರುವುದು ಉಲ್ಲೇಖಿತ ಆದೇಶದಲ್ಲಿ ಕಂಡುಬಂದಿರುತ್ತದೆ.

ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಾಜಿ ಸೈನಿಕರು ಮತ್ತು ಹಾಲೀ ಸೈನಿಕರು ಹಾಗೂ ವೀರ ನಾರಿಯರು ಮಕ್ಕಳ ಭವಿಷ್ಯಕ್ಕೆ ಸರ್ಕಾರದ ಆದೇಶ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿದೆ.
ಪ್ರತಿಯೊಬ್ಬ ದೇಶದ ನಾಗರೀಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಗಲು ರಾತ್ರಿ ಮಕ್ಕಳ ಜೊತೆಗಿದ್ದು ಕುಟುಂಬದ ಜೊತೆ ಇದ್ದು ಮಕ್ಕಳ ಶಿಕ್ಷಣ ಕಲಿಕೆಗಾಗಿ ಗಮನ ಹರಿಸುತ್ತಾರೆ. ಆದರೆ ಸೈನಿಕರು ದೇಶ ಸೇವೆಯೇ ಮುಖ್ಯ ಎಂದು ದೇಶದ ನಾನಾ ಗಡಿ ಭಾಗಗಳಲ್ಲಿ 17 ವರ್ಷಗಳಿಂದ 30 ವರ್ಷಗಳವರೆಗೆ ದೇಶ ಸೇವೆ ಮಾಡುತ್ತಾ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾಜೀ ಸೈನಿಕರಿಗೆ ನೀಡುವ 10% ಉದ್ಯೋಗ ಮೀಸಲಾತಿಯಂತೆ ವೃತ್ತಿ ಪರ ಕೋರ್ಸ್‌ಗಳ ಸೀಟ್ ಹಂಚಿಕೆಯಲ್ಲಿ ನೀಡಬೇಕು.
ಈ ಹಿಂದೆ ಎಲ್ಲಾ ನೇಮಕಾತಿ ಮತ್ತು ಶಿಕ್ಷಣ ವ್ಯವಸ್ಥೆಗಳಲ್ಲಿ ಮಾಜಿ ಸೈನಿಕರಿಗೆ 10% ನಿಗದಿಪಡಿಸಿರುವುದು ಈ ಮೂಲಕ ತಮಗೆ ತಿಳಿಯಪಡಿಸುವದರೊಂದಿಗೆ ಬಾಕಿ ವರ್ಗಗಳಿಗೆ ಹಂಚಿಕೆಯಾಗಿರುವುದನ್ನು ವಿರೋಧಿಸುತ್ತೇವೆ ಎಂದು ಡಾ. ಶಿವಣ್ಣ-ನಿವೃತ್ತ ಸೇನಾಧಿಕಾರಿ ರಾಜ್ಯಾಧ್ಯಕ್ಷರು ಸಂಘದ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936