
ಕುಣಿಗಲ್ ಎಂದಾಕ್ಷಣ ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಮೈ ನವಿರೇಳಲು ಎರಡು ಸಂಗತಿಗಳು ಕಾರಣ ಇಲ್ಲಿನ ಪುರಾಣ ಪ್ರಸಿದ್ದ ಮೂಡಲ್ ಕುಣಿಗಲ್ ಕೆರೆ ಇನ್ನೊಂದು ಜಗತ್ಪಸಿದ್ದ ಕುಣಿಗಲ್ ಕುದುರೆ ಪಾರಂ ಈ ಎರಡು ಕೇವಲ ಸ್ಥಳಗಳಲ್ಲ ಕುಣಿಗಲ್ ಜನರೋಂದಿಗೆ ಬೆಸೆದುಕೊಂಡಿರುವ ಭಾವನಾತ್ಮಕ ಸಂಬಂಧ, ಐತಿಹಾಸಿಕ ಕುರುಹು, ಕುಣಿಗಲ್ ನ ಪ್ರತಿಯೊಬ್ಬ ನಾಗರೀಕರ ಅಸ್ಮಿತೆ
ಕುಣಿಗಲ್ ಕುದುರೆ ಪಾರಂ ನ ನೆಲದ ಸತ್ವದ ಬಗ್ಗೆ ಇಲ್ಲಿನ ಜನರು ಅನೇಕ ದಂತಕತೆಗಳನ್ನು ಕಟ್ಟಿದ್ದಾರೆ ದೈವಿಕ ಭಾವನೆ ಹೊಂದಿದ್ದಾರೆ. ಕರ್ನಾಟಕವನ್ನು ಆಳ್ವಿಕೆ ಮಾಡಿದ ಗಂಗರು ಯುದ್ಧದಲ್ಲಿ ದಣಿದ ಕುದುರೆಗಳಿಗೆ ಮೇವು ಮತ್ತು ವಿಶ್ರಾಂತಿಗಾಗಿ ಈ ಜಾಗವನ್ನು ಆಶ್ರಯಿಸುತ್ತಿದ್ದರು ಎನ್ನುವ ಐತಿಹ್ಯ ವಿದೆ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಯುದ್ಧಕ್ಕೆ ಬೇಕಾಗುವ ಕುದುರೆಗಳನ್ನು ಇಲ್ಲಿ ಸಾಕಲು ಪ್ರಾರಂಭಿಸಿದರು ಪಶುಸಂಪತ್ತಿನ ಬಗ್ಗೆ ಅಪಾಯ ಕಾಳಜಿ ಹೊಂದಿದ್ದ ಟಿಪ್ಪು ಈ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಜಗತ್ತಿನಲ್ಲಿಯೇ ಉತ್ತಮ ತಳಿ ಸಂವರ್ಧನ ಕೇಂದ್ರವಾಗಿಸಿದನು

ಟಿಪ್ಪು ವಿನ ನಂತರ ಮೈಸೂರಿನ ಅರಸರು ಇದನ್ನು ನಿರ್ವಹಣೆ ಮಾಡಿದರು ಸ್ವಾತಂತ್ರ್ಯ. ನಂತರ ಬೆಂಗಳೂರು ಟರ್ಪ ಕ್ಲಬ್, ವಿಜಯ್ ಮಲ್ಯ ಒಡೆತನದ ಯು.ಬಿ ಗ್ರೂಪ್ ಗುತ್ತಿಗೆ ಪಡೆದು ನಿರ್ವಹಣೆ ಮಾಡಿದ್ದಾರೆ. ಈಗ ಯು.ಬಿ ಗ್ರೂಪ್ ನ 30 ವರ್ಷ ಗಳ ಗುತ್ತಿಗೆ ಅವಧಿ 2022 ಕ್ಕೆ ಮುಗಿದಿದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕುದುರೆ ತಳಿ ಸಂವರ್ಧನೆಯಲ್ಲಿ ಪರಿಣತಿ ಪಡೆದಿರುವ ಪೂನಾ ವಾಲ ಕಂಪನಿಗೆ 30 ವರ್ಷಗಳ ಅವಧಿಗೆ ಕುದುರೆ ಪಾರಂ ನಿರ್ವಣೆ ಮತ್ತು ಕುದುರೆ ತಳಿಗಳ ಮಾರಟ ವಹಿವಾಟು ನಡೆಸಲು ಮಾತ್ರ ಗುತ್ತಿಗೆ ನೀಡಲು ಎಲ್ಲಾ ಹಂತದ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ತಕ್ಷಣ ಚುನಾವಣೆ ಘೋಷಣೆಯಾದ್ದರಿಂದ ಸಚಿವ ಸಂಪುಟದ ಅನುಮೋದನೆ ಪಡೆಯಲು ಸಾಧ್ಯವಾಗದೆ ವಿಳಂಬವಾಯಿತು. ಬದಲಾದ ಸನ್ನಿವೇಶದಲ್ಲಿ ಈಗ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ . ಹಿಂದಿನ ಸರ್ಕಾರದಲ್ಲಿ ಪೂನಾ ವಾಲಾಗೆ ಕೊಡಲು ತೀರ್ಮಾನಿಸಿದ್ದ ಗುತ್ತಿಗೆ ಟೆಂಡರ್ ಅನ್ನು ಸಂಪೂರ್ಣ ರದ್ದು ಪಡಿಸಿದ ಹೊಸದಾಗಿ ಟೆಂಡರನ್ನೂ ಕರೆಯುತ್ತಿಲ್ಲ ಸರ್ಕಾರವೇ ನಿರ್ವಹಣೆ ಮಾಡುತ್ತದೆ ಎನ್ನುವ ಹೇಳಿಕೆಯನ್ನೂ ನೀಡುತ್ತಿಲ್ಲ. ಬದಲಾಗಿ ಇಡೀ ಕುದುರೆ ಪಾರಂ ಜಾಗವನ್ನು ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡಿ ಅತೀ ಶ್ರೀಮಂತರಿಗೆ ವಿಲ್ಲಾ ಗಳನ್ನು ಕಟ್ಟಿಸಿ ಮಾರಾಟ ಮಾಡಲು ಹೊರಟಿದೆ ಇದನ್ನು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರಾದ ಬೈರತಿ ಸುರೇಶ್ ಅವರು ಬಹಿರಂಗಪಡಿಸಿದ್ದಾರೆ ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ. ರಂಗನಾಥ್ ಅವರೂ ಪತ್ರಿಕಾ ಹೇಳಿಕೆಯನ್ನು ನೀಡಿ ಇದನ್ನು ಖಚಿತ ಪಡಿಸಿದ್ದಾರೆ. ಸರ್ಕಾರ ಈ ರೀತಿ ಮಾಡುವುದರಿಂದ ಕುಣಿಗಲ್ ಜನತೆಗೆ ಏನು ಲಾಭ ಎನ್ನುವುದನ್ನು ಬಹಿರಂಗವಾಗಿ ಹೇಳುತ್ತಿಲ್ಲ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾನ್ಯ ಶಾಸಕರಾದ ಡಾ. ರಂಗನಾಥ್ ಅವರ ಗಮನಕ್ಕೆ ನಾವು ತರಬಯಸುವುದೇನೆಂದರೆ ಕುಣಿಗಲ್ ತಾಲ್ಲೂಕಿನ ಜನ ಅಭಿವೃದ್ಧಿ ವಿರೋಧಿಗಳಲ್ಲ ನೀವು ಇಲ್ಲಿನ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಕೈಗಾರಿಕೆ, ಐ.ಟಿ, ໖.3 ಕಂಪನಿಗಳನ್ನು ತಾಲ್ಲೂಕಿನಲ್ಲಿ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದರೆ ಕುಣಿಗಲ್ ತಾಲ್ಲೂಕಿನ ಬೇರೆ ಬೇರೆ ಜಾಗದಲ್ಲಿ ಸರ್ಕಾರಿ ಖಾಲಿ ಜಮೀನಿದೆ ಅಲ್ಲಿ ಸ್ಥಾಪಿಸಿ ಅದನ್ನು ಬಿಟ್ಟು ಐತಿಹಾಸಕ ಪರಂಪರೆ ಹೊಂದಿರುವ ಕುಣಿಗಲ್ ಕುದುರೆ ಪಾರಂ ನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡುತ್ತೇವೆ, ಖಾಸಗಿ ಮೆಡಿಕಲ್ ಕಾಲೇಜು ಕಟ್ಟುತ್ತೇವೆ ಐ.ಟಿ.ಬಿ ಟಿ ಕಂಪನಿ ತರುತ್ತೇವೆ ಎನ್ನುವ ನಿಮ್ಮ ಮತ್ತು ಸರ್ಕಾರದ ನಿಲುವಿಗೆ ಪ್ರತಿಯೊಬ್ಬ ಕುಣಿಗಲ್ ತಾಲ್ಲೂಕಿನ ಸ್ವಾಭಿಮಾನಿ ನಾಗರೀಕರ ವಿರೋಧವಿದೆ. ಕುಣಿಗಲ್ ಕುದುರೆ ಪಾರಂ ಅನ್ನು ಸರ್ಕಾರವೇ
ನಿರ್ವಹಣೆ ಮಾಡಬೇಕು ಇಲ್ಲವೇ ಮತ್ತೋಂದು ಅವಧಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಈ ಜಾಗದ ಮೂಲ ಸ್ವರೂಪಕ್ಕೆ ಯಾವುದೇ ದಕ್ಕೆಯಾಗದ ರೀತಿ ಮತ್ತು ಇದರ ಐತಿಹಾಸಿಕ ಪರಂಪರೆಯನ್ನು ಹಾಳುಮಾಡದ ಹಾಗೆ ನೋಡಿಕೊಳ್ಳು. ಸಂಸ್ಥೆಗೆ ನಿರ್ವಹಣೆ ಗೆ ಮಾತ್ರ ಗುತ್ತಿಗೆಗೆ ನೀಡಬೇಕು ಏಷ್ಯಾ ಖಂಡದಲ್ಲಿಯೇ ಎರಡನೇ ಸ್ಥಾನ ಪಡೆದು ಈಗ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಕುದುರೆ ತಳಿ ಸಂವರ್ದನಾ ಕೇಂದ್ರ ಇದಾಗಿರುವುದರಿಂದ ಕರ್ನಾಟ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ಇದನ್ನು ಸಂರಕ್ಷಣೆ ಮಾಡಬೇಕು ಎನ್ನುವುದು ಕುಣಿಗಲ್ ಜನರ ಒತ್ತಾಯವಾಗಿದೆ.
ಕೆಲವರು ಕುಣಿಗಲ್ ಕುದುರೆ ಪಾರಂ ನಲ್ಲಿ ಇರುವ ಕುದುರೆಗಳಿಗೆ ಕೇವಲ 100 ಎಕ್ಕರೆ ಜಾಗ ಸಾಕು ಇನ್ನುಳಿದ ಜಾಗದಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡಲಿ, ಶಾಲಾ, ಕಾಲೇಜು ಕಟ್ಟಲಿ, ಇಂಜಿನಿಯರಿಂಗ್, ಖಾಸಗಿ ಮೆಡಿಕಲ್ ಕಾಲೇಜು ಕಟ್ಟಲಿ ಎನ್ನುವ ವಾದ ಮಾಡುತ್ತಾರೆ ಇದು ಸಂಪೂರ್ಣ ಅವಾಸ್ತವ ಏಕೆಂದರೆ ಈಗ ಕುಣಿಗಲ್ ಕುದುರೆ ಪಾರಂ ನಲ್ಲಿ 185 ಕುದುರೆಗಳಿವೆ ವೈಜ್ಞಾನಿಕವಾಗಿ ನೋಡಿದರೆ ಒಂದು ಕುದುರೆಗೆ 5 ಎಕ್ಕರೆ ಜಾಗ ಬೇಕು ಕನಿಷ್ಠ 3 ಎಕ್ಕರೆಯಾದರೂ ಇರಲೇ ಬೇಕು ಈಗ ಕುಣಿಗಲ್ ಸ್ಟಡ್ ಪಾರಂ ಜಾಗ ಸಂಪೂರ್ಣವಾಗಿ ಕುದುರೆ ಸಾಕಾಣಿಕೆಗೆ ಬಳಕೆಯಾಗುತ್ತಿದೆ ಎಲ್ಲಿಯೂ ಜಾಗ ವ್ಯರ್ಥವಾಗಿ ಉಳಿದಿಲ್ಲ ಇದರ ಜೊತೆಗೆ ಉತ್ತಮ ಆಕ್ಸಿಜನ್ ಒದಗಿಸುವ 200 ವರ್ಷಗಳಷ್ಟು ಹಳೆಯ ನೂರಾರು ಅರಳಿಮಗಳು ಸೇರಿದಂತೆ ಸುಮಾರು 6000 ಹೆಚ್ಚು ಮರಗಳಿವೆ ಮೊಲ, ಗೂಬೆ, ಗುಬ್ಬಚ್ಚಿ, ಗೊರವಂಕ, ಮರಕುಟಿಕ, ನವಿಲು ಇಲ್ಲಿ ವಾಸವಾಗಿದ್ದು ಇಡೀ ಕುದುರೆ ಪಾರಂ ಜಾಗ ಜೀವ ವೈವಿಧ್ಯತೆಯಿಂದ ಕೂಡಿದ ಇಂತಹ ಐತಿಹಾಸಿಕ ಜಾಗವನ್ನು ಕಳೆದುಕೊಳ್ಳಲು ಕುಣಿಗಲ್ ಮಣ್ಣಿನಲ್ಲಿ ಹುಟ್ಟಿದ ಯಾವ ಸ್ವಾಭಿಮಾನಿಯೂ ಇಷ್ಟಪಡುವುದಿಲ್ಲ
ಕರ್ನಾಟಕ ಸರ್ಕಾರ ಐತಿಹಾಸಿಕ ಕುಣಿಗಲ್ ಕುದುರೆ ಪಾರಂನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಲು ಯೋಜನೆ ಮಾಡುತ್ತಿದೆ ಎನ್ನುವ ವಿಷಯ ತಿಳಿದ ಕೂಡಲೇ ಕುಣಿಗಲ್ ತಾಲ್ಲೂಕಿನ ಸಮಾನ ಮನಸ್ಕರು, ರಾಜಕೀಯ ಪಕ್ಷಗಳ ಮುಖಂಡರು, ದಲಿತಪರ, ಸಂಘಟನೆಗಳು, ಮಹಿಳಾ ಸಂಘಟನೆ, ಕಾರ್ಮಿಕ, ರೈತ ಸಂಘಟನೆ, ಕನ್ನಡಪರ, ಪ್ರಗತಿಪರ ಸಂಘಟನೆ ಹಿಂದುಳಿದ ಜಾತಿ ಸಂಘಟನೆಗಳು ಮುಂತಾದ ಸಂಘಟನೆಗಳ ಮುಖಂಡರು ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಮೂರು ಸಭೆ ನಡೆಸಿ ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಅನ್ನು ಉಳಿಸಿಕೊಳ್ಳಲು ” ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟ ಸಮಿತಿ “” ರಚಿಸಿ ಈ ಸಮಿತಿ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತು ಪಶುಸಂಗೋಪನೆ ಇಲಾಖೆ ಸಚಿವರಿಗೆ ಕುಣಿಗಲ್ ಕ್ಷೇತ್ರದ ಶಾಸಕರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಕುಣಿಗಲ್ ಕುದುರೆ ಪಾರಂ ಅನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಮನವಿ ಮಾಡಿದ್ದೇವೆ.
ಮಾಜಿ ಪ್ರಧಾನಿ H. D ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿಸಲ್ಲಿಸಿದ್ದೇವೆ ಮಾಜಿ ಮುಖ್ಯಮಂತ್ರಿ H.D ಕುಮಾರ ಸ್ವಾಮಿ ಅವರನ್ನೂ ಭೇಟಿಮಾಡಿ ಮನವಿ ಕೊಟ್ಟಿದ್ದೇವೆ ನಮ್ಮ ಮನವಿಗೆ ಸ್ಪಂದಿಸಿದ H. ದೇವೇಗೌಡ ರವರು ಮತ್ತು ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಐತಿಹಾಸಿಕ ಕುಣಿಗಲ್ ಕುದುರೆ ಪಾರಂ ಅನ್ನು ಯಥಾಸ್ಥಿತಿಯಲ್ಲಿಯೇ ಉಳಿಸ ಬೇಕೆಂದು ಮನವಿ ಮಾಡಿದ್ದಾರೆ.
ನಾಡಿನ ಇತಿಹಾಸ ತಜ್ಞರು, ಪರಿಸರವಾದಿಗಳು, ಕನ್ನಡಪರ, ದಲಿತಪರ, ರೈತ ಮತ್ತು ಕಾರ್ಮಿಕ ಸಂಘಟನೆಯ ಮುಖಂಡರನ್ನು ಭೇಟಿಮಾಡಿ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟಕ್ಕೆ ಬೆಂಬಲ ಕೊರಿದ್ದೇವೆ ಇವರೆಲ್ಲರೂ ಬೆಂಬಲ ಸೂಚಿಸಿದ್ದಾರೆ.
ಕುಣಿಗಲ್ ಕುದುರೆ ಪಾರಂ ನಲ್ಲಿ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಬಾರದು ಈ ಐತಿಹಾಸಿಕ ಪಾರಂ ಅನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕೆಂದು ಜನವರಿ 17, 2024 ಕುಣಿಗಲ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಿದ್ದೇವೆ. ಆದರೂ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿಲ್ಲ ಸ್ಥಳೀಯ ಶಾಸಕರು ಕುದುರೆ ಪಾರಂ ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ತೆರೆದು ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಗೊಂದಲ ಉಂಟುಮಾಡುತ್ತಿದ್ದಾರೆ . ಕುಣಿಗಲ್ ಕುದುರೆ ಪಾರಂ ನಲ್ಲಿ ಸರ್ಕಾರ ಕುದುರೆಗೆ ಸಂಬಂಧ ಇಲ್ಲದ ಯಾವುದೇ ಯೋಜನೆ ತಂದರೂ ನಮ್ಮ ವಿರೋಧವಿದೆ ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಯಥಾಸ್ಥಿತಿಯಲ್ಲಿಯೇ ಉಳಿಯಬೇಕೆನ್ನುವುದು ನಮ್ಮ ಒತ್ತಾಸೆಯಾಗಿದೆ.
ಬೇಡಿಕೆ
೧.ಕುಣಿಗಲ್ ಕುದುರೆ ಪಾರಂ ನಲ್ಲಿ ರಾಜ್ಯ ಸರ್ಕಾರ ಇಂಟಿಗ್ರೇಟೆಡ್ ಟೌನ್ ಶೀಪ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು. ೨.ಕುಣಿಗಲ್ ಕುದುರೆ ಎಂದು ಖ್ಯಾತಿ ಪಡೆದು ವಿಶ್ವಕ್ಕೆ ಉತ್ತಮ ತಳಿಯ ಕುದುರೆಗಳನ್ನು ನೀಡಿರುವ ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು.
೩. ಕುಣಿಗಲ್ ಕುದುರೆ ಪಾರಂ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು.
೪. ಕುದುರೆ ಪಾರಂ ನ ಜಾಗದಲ್ಲಿ ಯಾವುದೇ ಕೈಗಾರಿಕೆ, ವಾಣಿಜ್ಯ ಉದ್ದೇಶದ ಕಟ್ಟಡ ಕಟ್ಟಲು ಜಾಗ ಮಂಜೂರು ಮಾಡಬಾರದು.
೫. ಕುಣಿಗಲ್ ಕುದುರೆ ಪಾರಂ 400 ವರ್ಷಗಳ ಇತಿಹಾಸ ಹೊಂದಿದ್ದು, ಈಗಲೂ ಅಸ್ತಿತ್ವದಲ್ಲಿರುವುದರಿಂದ ಕುಣಿಗಲ್ ಕುದುರೆ ಪಾರಂ ಅನ್ನು 1961 ಕಲಂ 2 ಮತ್ತು 3 ಕರ್ನಾಟಕ ಐತಿಹಾಸಿಕ ಸ್ಮಾರಕಗಳ ಅಧಿನಿಯಮದ ಅನ್ವಯ ಪಾರಂಪರಿಕ ಸ್ಥಳವೆಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಬೇಕು ಎಂದು ಪಾರಂಪರಿಕ ಕುಣಿಗಲ್ ಕುದುರೆ ಪಾರಂ ಉಳಿವಿಗಾಗಿ ಹೋರಾಟ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936