ನವದೆಹಲಿ: ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸರು ಈಗ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಈಗ ಈ ವಾಹನಗಳನ್ನು ನಿಲ್ಲಿಸಲು, ಅಧಿಕಾರಿಗಳು ಮತ್ತು ಪೊಲೀಸರು ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಸ್ಪೀಡ್ ಡಿಟೆಕ್ಟಿಂಗ್ ಕ್ಯಾಮೆರಾಗಳನ್ನು (Speed detecting camera) ಅಳವಡಿಸುತ್ತಿದ್ದಾರೆ. ಈ ಹೈಟೆಕ್ ಕ್ಯಾಮೆರಾಗಳನ್ನು ಕಂಬಗಳ ಮೇಲೆ ಅಳವಡಿಸಲಾಗುತ್ತದೆ. ವಾಹನ ವೇಗವಾಗಿ ಬಂದರೆ, ಈ ಕ್ಯಾಮೆರಾಗಳು ಅದನ್ನು ಪತ್ತೆ ಮಾಡುತ್ತದೆ ಮತ್ತು ಪೊಲೀಸರಿಗೆ ಮಾಹಿತಿ ನೀಡುತ್ತದೆ. ಇದನ್ನು ಕಂಬಗಳ ಮೇಲೆ ಮಾತ್ರವಲ್ಲದೆ ಎಲ್ಲಿ ಬೇಕಾದರೂ ಅಳವಡಿಸಬಹುದು ಎನ್ನುವುದು ಮತ್ತೊಂದು ವಿಶೇಷ.
ಹಿಡನ್ ಕ್ಯಾಮೆರಾ :
ದೆಹಲಿ (Delhi) ಹರಿಯಾಣಕ್ಕೆ ಹೋಗುವ ದಾರಿಯಲ್ಲಿ ಈ ವ್ಯವಸ್ಥೆಯಿದೆ. ಇಲ್ಲಿ ಪೊಲೀಸರು ಸ್ಪೀಡ್ ಡಿಟೆಕ್ಟಿಂಗ್ ಸಿಸ್ಟಮ್ (Speed detecting system) ಅನ್ನು ಕಾರಿನ ಹಿಂದೆ ಇಟ್ಟಿದ್ದಾರೆ. ಇಲ್ಲಿ ಕ್ಯಾಮೆರಾಗಳ ಸಹಾಯದಿಂದ, ಯಾವ ವಾಹನವು ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ನಿಲ್ಲಿಸಲಾಗುತ್ತದೆ. ಮತ್ತು ದಂಡ ವಿಧಿಸಲಾಗುತ್ತದೆ. ಇಲ್ಲಿ ಮಾರುತಿ ಸುಜುಕಿ ಎರ್ಟಿಂಗಾದಲ್ಲಿ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾವನ್ನು (Speed trap camera) ಅಳವಡಿಸಲಾಗಿದೆ.
2000 ರೂ. ಗಳ ದಂಡ ಮತ್ತು ಡಿಎಲ್ ಕೂಡ ರದ್ದು :
ಕ್ಯಾಮೆರಾ ಮೂಲಕ ವಾಹನದ ಅತಿ ವೇಗವನ್ನು ಗಮನಿಸಿದ ಆಪರೇಟರ್, ತನ್ನ ಹಿರಿಯ ಅಧಿಕಾರಿಗೆ ಆ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡುತ್ತಾನೆ. ಇದಾದ ನಂತರ ಅಧಿಕಾರಿಗಳು ಆ ವಾಹನವನ್ನು ತಡೆದು ನಿಲ್ಲಿಸುತ್ತಾರೆ. ಅಲ್ಲದೆ, 2000 ರೂ. ಗಳ ದಂಡ ವಿಧಿಸುತ್ತಾರೆ. ಇಷ್ಟು ಮಾತ್ರವಲ್ಲದೆ, ಚಾಲನಾ ಪರವಾನಗಿಯನ್ನು (Driving licence) ಮೂರು ತಿಂಗಳವರೆಗೆ ರದ್ದುಗೊಳಿಸಬಹುದು.
ಲೇಸರ್ ಗನ್ನಂತೆ ಕೆಲಸ ಮಾಡುತ್ತದೆ :
ಈ ವ್ಯವಸ್ಥೆಯು ಲೇಸರ್ ಗನ್ ಬಳಸುವಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ಲೇಸರ್ ಗನ್ಗಳು ಹೆಚ್ಚು ದುಬಾರಿಯಾಗಿದೆ. ಆಧುನಿಕ ರಡಾರ್ ಆಧಾರಿತ ವ್ಯವಸ್ಥೆಗಳು ANPR ಅಂದರೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ಇದರಲ್ಲಿ ವಾಹನದ ನಂಬರ್ ನೋಟ್ ಆಗುತ್ತದೆ. ಈ ಸಿಸ್ಟಮ್ ಬಂದ ನಂತರ ಪೋಲಿಸರಿಗೆ ಸಾಕಷ್ಟು ಸಹಾಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ