ನವದೆಹಲಿ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರುತ್ತಿದೆ. ಬೆಂಗಳೂರು, ಮುಂಬೈ ಮತ್ತು ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿ ಲೀಟರ್ʼಗೆ 100 ರೂ.ಗಳ ಗಡಿ ದಾಟಿದೆ. ಇದರ ನಡುವೆ 1 ಲೀಟರ್ ಪೆಟ್ರೋಲ್ ಗೆ 1 ರೂ.ಗೆ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.
ಹೌದು, ಮಹಾರಾಷ್ಟ್ರದಲ್ಲಿ ಶಿವಸೇನೆ ವತಿಯಿಂದ ಆದಿತ್ಯ ಠಾಕ್ರೆ(Aditya Thackeray’s Birthday) ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗಿದೆ.
ಯೆಸ್, ಮಹಾರಾಷ್ಟ್ರದ ಡೊಂಬಿವಲಿ ಯುವ ಸೇನೆ(Shiv Sena) ಅಲ್ಲಿನ ಉಸ್ಮಾ ಪೆಟ್ರೋಲ್ ಬಂಕ್ನಲ್ಲಿ ಭಾನುವಾರ ಬೆಳಗ್ಗೆಯಿಂದ ಕೇವಲ ಒಂದು ರೂಪಾಯಿಗೆ 1 ಲೀಟರ್ ಪೆಟ್ರೋಲ್ ಮಾರಾಟ ಮಾಡಿದೆ. ಇಷ್ಟೊಂದು ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುತ್ತಿದೆ ಅಂದರೆ ಜನ ಬಿಡ್ತಾರಾ? ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುತ್ತಿರುವ ವಿಚಾರ ತಿಳಿದ ಜನರು ಬೆಳಗ್ಗೆಯಿಂದಲೂ ಕ್ಯೂ ನಿಂತು ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ : Oxygen Plant:ಕರೋನಾ ಮೂರನೇ ತರಂಗದಲ್ಲಿ ಎದುರಾಗಲ್ಲ ಆಮ್ಲಜನಕದ ಕೊರತೆ
ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಈ ರೀತಿ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್(Petrol) ಮಾರಾಟ ಮಾಡಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 102 ರೂಪಾಯಿ ತಲುಪಿದ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದ ಶಿವಸೇನೆ ಗ್ರಾಹಕರಿಗೆ ಬಂಪರ್ ಪೆಟ್ರೋಲ್ ಕೊಡುಗೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.