CBSE Class 10 Result Update: ಮತ್ತೆ ವಿಳಂಬವಾಗಲಿದೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ

CBSE Class 10 Result Update : ದೇಶದಲ್ಲಿ ಹೆಚ್ಚುತ್ತಿದ್ದ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಆದರೆ, 12 ನೇ ತರಗತಿಯ ಪರೀಕ್ಷೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇವೆಲ್ಲದರ ಮಧ್ಯೆ,  10 ನೇ ತರಗತಿಯ ವಿದ್ಯಾರ್ಥಿಗ ಅಂಕಗಳನ್ನು ಸಿಬಿಎಸ್‌ಇ ಬೋರ್ಡ್ ಗೆ ಸಲ್ಲಿಸಲು ಶಾಲೆಗಳಿಗೆ ನೀಡಲಾಗಿದ್ದ ಗಡುವನ್ನು  ಜೂನ್ 30 ರವರೆಗೆ ವಿಸ್ತರಿಸಿದೆ. ಸಿಬಿಎಸ್‌ಇ ಈ ಹಿಂದೆ ಜೂನ್ 11 ರೊಳಗೆ ಅಂಕಗಳನ್ನು ಪಟ್ಟಿ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಜೂನ್ 20 ಪ್ರಕಟಿಸುವುದಾಗಿ ಹೇಳಿತ್ತು. 

 ಪ್ರಸ್ತುತ COVID-19 ಸಾಂಕ್ರಾಮಿಕದ ಸ್ಥಿತಿ ಮತ್ತು ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ (Lockdown) ಜಾರಿಯಲ್ಲಿರುವುದರಿಂದ ಶಿಕ್ಷಕರು ಮತ್ತು ಸಿಬ್ಬಂದಿ  ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗಡುವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಸಿಬಿಎಸ್‌ಇ (CBSE) ಪರೀಕ್ಷಾ ನಿಯಂತ್ರಕ ಸನ್ಯಂ ಭರದ್ವಾಜ್ ಈ ವಿಷಯ ತಿಳಿಸಿದ್ದಾರೆ. ‘ಶಿಕ್ಷಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸದ್ಯದ ಪರಿಸ್ಥಿತಿ ಮತ್ತು ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳ ಅಂಕಗಳನ್ನು ಸಿಬಿಎಸ್ಇಗೆ ಸಲ್ಲಿಸಲು ವಿಧಿಸಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಶಾಲೆಗಳು ಜೂನ್ 30ರೊಳಗೆ ಅಂಕಗಳನ್ನು ಬೋರ್ಡ್ ಗೆ ಸಲ್ಲಿಸಬೇಕಾಗಿ ಅವರು ತಿಳಿಸಿದ್ದಾರೆ. 

ಈ ಬಾರಿ ಹತ್ತನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣ, ಅಂಕಗಳ ಲೆಕ್ಕಾಚಾರಕ್ಕೆ ಹೊಸ ಸೂತ್ರವನ್ನು ನಿಗದಿಪಡಿಸಲಾಗಿತ್ತು. ಈ ಸೂತ್ರದ ಪ್ರಕಾರ, ಪ್ರತಿ ವಿಷಯದಲ್ಲಿ 20 ಅಂಕಗಳು internal assessment ಮೂಲಕ ನಿಗದಿಯಾಗುತ್ತದೆ. ಉಳಿದ 80 ಅಂಕಗಳನ್ನು ವರ್ಷವಿಡೀ ತರಗತಿಯಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ (exam) ವಿದ್ಯಾರ್ಥಿಯು ಪಡೆದ ಅಂಕಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. 

ವಿದ್ಯಾರ್ಥಿಗಳ ಅಂಕವನ್ನು ಲೆಕ್ಕ ಹಾಕುವ ಮೊದಲು ಶಾಲೆ, ಪ್ರಾಂಶುಪಾಲರು ಮತ್ತು ಏಳು ಮಂದಿ ಶಿಕ್ಷಕರ ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಎರಡು ಭಾಷೆಯ ಶಿಕ್ಷಕರು ಅಲ್ಲದೆ ಪಕ್ಕದ ಶಾಲೆಯ ಇಬ್ಬರು ಶಿಕ್ಷಕರು ಈ ಸಮಿತಿಯಲ್ಲಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More | https://zeenews.india.com/kannada

Leave a Reply

Your email address will not be published. Required fields are marked *