
ಪ್ರಯಾಗರಾಜ್ : ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಕರೋನಾ (Coronavirus ) ಪ್ರಕರಣ ಮತ್ತು ಕ್ವಾರೆಂಟೈನ್ ಸೆಂಟರ್ ನ ಸ್ಥಿತಿಗತಿಗಳ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಅಲಹಾಬಾದ್ ಹೈಕೋರ್ಟ್ ನಲ್ಲಿ (Allahabad High Court) ನಡೆಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕರೋನಾ ಮಹಾಮಾರಿಯ ಮಧ್ಯೆ ಪಂಚಾಯತ್ ಚುನಾವಣೆಯನ್ನು ನಡೆಸಿ, ಅದರಿಂದ ಉಂಟಾದ ಪರಿಣಾಮಗಳನ್ನು ಎದುರಿಸುವಲ್ಲಿ ರಾಜ್ಯ ಚುನಾವನಾ ಆಯೋಗ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
‘ದೂರದೃಷ್ಟಿ ಕೊರತೆಯಿಂದಾಗಿ ಹಳ್ಳಿಗಳನ್ನೂ ಸೋಂಕು ತಲುಪುವಂತಾಯಿತು’ :
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಅವರನ್ನೊಳಗೊಂಡ ಏಕಸದಸ್ಯ ಪೀಠ, “ದೂರದೃಷ್ಟಿಯ ಕೊರತೆಯಿಂದಾಗಿ, ಉತ್ತರಪ್ರದೇಶದಲ್ಲಿ COVID-19 ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಕರೋನಾದ ಮೊದಲ ಅಲೆಯ ವೇಳೆ ವೈರಸ್ ಗ್ರಾಮೀಣ ಪ್ರದೇಶಗಳನ್ನು ತಲುಪಿರಲಿಲ್ಲ. ಆದರೆ ಈ ಬಾರಿ ಗ್ರಾಮೀಣ ಪ್ರದೇಶಗಳು, ಸಣ್ಣ ಪಟ್ಟಣಗಳನ್ನೂ ಕರೋನಾ ಸೋಂಕು (Coronavirus) ತಲುಪಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ : COVID-19: 14 ದಿನಗಳ Quarantine ನಂತರ ಆರ್‌ಟಿ-ಪಿಸಿಆರ್ ಟೆಸ್ಟ್ ಏಕೆ ಅಗತ್ಯವಿಲ್ಲ? ತಜ್ಞರು ಏನ್ ಹೇಳ್ತಾರೆ?
‘ಮತದಾನದಲ್ಲಿ ಪ್ರಾಣ ಕಳೆದುಕೊಂಡವರಿಗೆ 1 ಕೋಟಿ ರೂ ಪರಿಹಾರ’ :
ಇದೇ ವೇಳೆ, ಪಂಚಾಯತ್ ಚುನಾವಣೆಯಲ್ಲಿ (Panchayath Election) ಪ್ರಾಣ ಕಳೆದುಕೊಂಡ ಸಿಬ್ಬಂದಿಯ ಕುಟುಂಬಕ್ಕೆ ನೀಡಲಾಗಿರುವ ಪರಿಹಾರ ಮೊತ್ತದ ಬಗ್ಗೆ ಮತ್ತೊಮ್ಮೆ ವಿಮರ್ಶೆ ಮಾಡುವಂತೆ ಕೋರ್ಟ್ (Court) ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಸೂಚಿಸಿದೆ. ಚುನಾವನಾ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿ ಮೇಲೆ ಒತ್ತಡ ಹೇರಲಾಗಿತ್ತು. ಹಾಗಾಗಿ ಮೃತ ಸಿಬ್ಬಂದಿ ಕುಟುಂಬಕ್ಕೆ ಕಡಿಮೆ ಎಂದರೂ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರ್ಟ್ ಹೇಳಿದೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ಪುನರ್ ಪರಿಶೀಲಿಸಲಿದೆ ಎಂದು ಕೋರ್ಟ್ ಆಶಾಭಾವ ವ್ಯಕ್ತಪಡಿಸಿದೆ.
ಕರೋನಾ ಹರಡುತ್ತಿರುವ ವೇಗದ ಬಗ್ಗೆ ಹೈಕೋರ್ಟ್ ಆತಂಕ :
ಗ್ರಾಮೀಣ ಪ್ರದೇಶಗಳು, ಸಣ್ಣ ಪಟ್ಟಣಗಳಲ್ಲೂ ಕರೋನಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಹೈಕೋರ್ಟ್ (high court) ಆತಂಕ ವ್ಯಕ್ತಪಡಿಸಿದೆ. ‘ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೋನಾ ರೋಗಿಗಳಿಗೆ (Corona Patient) ಚಿಕಿತ್ಸೆ ನೀಡಲು ಇನ್ನೂ ಸೌಲಭ್ಯಗಳಿಲ್ಲ. ಚಿಕಿತ್ಸೆಯ ಕೊರತೆಯಿಂದ ಜನರು ಸಾಯುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ. ಇದೇ ವೇಳೆ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಚಿಕಿತ್ಸಾ ಸೌಲಭ್ಯಗಳು ಮತ್ತು ಕರೋನಾ ಪರೀಕ್ಷೆಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ, ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರಿನ ಬಗ್ಗೆ ತನಿಖೆ ನಡೆಸಲು 48 ಗಂಟೆಗಳ ಒಳಗೆ ಪ್ರತಿ ಜಿಲ್ಲೆಯಲ್ಲೂ ಮೂವರು ಸದಸ್ಯರ ಸಮಿತಿ ರಚಿಸುವಂತೆ ಹೇಳಿದೆ.
ಇದನ್ನೂ ಓದಿ : Corona Vaccine Good news : 2-18 ವರ್ಷದೊಳಗಿನವರಿಗೆ Covaxin ಟ್ರಯಲ್ ಗೆ ಶಿಫಾರಸು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.