
ಮಹಿಳೆಯರ ಸುರಕ್ಷತೆ ಹಾಗೂ ಅವರ ಮೇಲಿನ ದೌರ್ಜನ್ಯ ಗಳು, ವಿವಾಹ ವಿಚ್ಚೇದನಾದಂತಹ ಸಮಸ್ಯೆಗಳ ಪರಿಹಾರಕ್ಕೆ ನೂತನವಾಗಿ
ಮಾನವ ಹಕ್ಕುಗಳ ಕೌಟುಂಬಿಕ ಸಲಹಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದು ನಿವೃತ್ತ ಸೈನಿಕ, ವಕೀಲ ಸಿಂಹ ಶಿವುಗೌಡ ಭಾರತೀಯ ತಿಳಿಸಿದ್ದಾರೆ
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರ ಮೇಲೆ ಇತೀಚಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಅವರ ಸುರಕ್ಷತೆ ಅತೀ ಅಗತ್ಯ ವಾಗಿದೆ. ವಿವಾಹ ವಿಚ್ಚೇದನ ದಂತಹ ಸಮಸ್ಯೆ ನಿವಾರಣೆಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂದರು.
ಸಂಸ್ಥೆಯ ನಿರ್ದೇಶಕ ಲಯನ್ ಗಜೇಂದ್ರ ನಾಯ್ಡು ಮಾತನಾಡಿ ವಿವಾಹ ವಿಚ್ಛೇದನದಂತಹ ಪ್ರಕರಣಗಳಲ್ಲಿ ಕೌನ್ಸಿಲಿಂಗ್ ಅಗತ್ಯವಿದೆ.ಇದರ ಮೂಲಕ ಹೆಣ್ಣು ಮಕ್ಕಳಿಗೆ ಸ್ಥೈರ್ಯ ನೀಡುವುದು ಮುಖ್ಯವಾಗಿದೆ. ಕುಟುಂಗಳನ್ನು ಒಂದು ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕಿ ಲಯನ್ ಸುಮಾ ಮಹೇಂದರ್ ಮಾತನಾಡಿ, ಮಹಿಳೆಯರ ಪರವಾಗಿ ಹೆಚ್ಚಿನ ಮಟ್ಟದಲ್ಲಿ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಪುರುಷರು ಕೂಡ ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದು ಅವರ ಪರವಾಗಿ ನಿಲ್ಲುವ ಅಗತ್ಯವಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮೋಹನ್ ಕುಮಾರ್
ಸಹ ಕಾರ್ಯದರ್ಶಿ ನೀಲಾ ಪಟೇಲ್ ಮದ್ದೂರು, ರಜನಿ ರಾಜ್ ಮತ್ತಿತರರು ಹಾಜರಿದ್ದರು.
City Today News
9341997936