
ಮದ್ಯದ ಲೋಕದಲ್ಲಿ ತನ್ನದೆ ಬ್ರಾಂಡ್ ಕ್ರಿಯೆಟ್ ಮಾಡಿರುವ ಖೋಡೆಸ್ ನ ಒಬ್ಬ ಮಾಲೀಕನ ಬಂಡವಾಳ ಬಯಲಾಗಿದೆ. ಖೋಡೆಸ್ ಕಂಪನಿಯ ಮಾಲೀಕ ಲೇಟ್. ಖೋಡೆ ಲಕ್ಷ್ಮಣ್ ಸಾ ಅವರ ಮರಣ ನಂತರ ತಾವು ಸಂಪಾದಿಸಿದ ಆಸ್ತಿಯನ್ನು ತಮ್ಮ ಐವರು ಮಕ್ಕಳಿಗೆ ಹಂಚಿ ವಿಲ್ ಬರೆದು ಸಾಮನಾಗಿ ಹಂಚಿದ್ದಾರೆ.

ಖೋಡೆ ಲಕ್ಷ್ಮಣ್ ಅವರ ಹಿರಿಯ ಮಗನ ಸಾವಿನ ನಂತರ ಆಸ್ತಿ ಪಾಸ್ತಿ ವಿವಾದಗಳೇ ಎದ್ದು ನಿಂತಿವೆ. ಕೆ.ಎಲ್.ಸ್ವಾಮಿ ತಮ್ಮ ಸಹೋದರಿಯರಿಂದ ಬಿಳಿ ಹಾಳೆಗೆ ಸಹಿ ಹಾಕಿಸಿಕೊಂಡು ಆಸ್ತಿ ಲಪಾಟಯಿಸಿದ್ದಾರೆ.

ಬಳಿಕ ಕೆ. ಎಲ್ ಸ್ವಾಮಿ ತಮ್ಮ ಸಹೋದರಿಯರಿಗೆ ಬಾಣಸವಾಡಿ ಬಳಿ ಇರುವ ಪ್ರೇಸ್ಟೀಜ್ ವುಡ್ ಲೆಂಡ್ ಬಳಿ ಅರ್ಪಾಟ್ ಮೆಂಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ. ಇದೀಗ ಖೋಡೆ ಲಕ್ಷ್ಮಣ್ ಪುತ್ರಿಯರ ಮಕ್ಕಳು ನ್ಯಾಯ ಕೋಡಿಸುವಂತೆ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಕೆಲ್.ಸ್ವಾಮಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣನೆಯಲ್ಲಿ ದೂರು ದಾಖಲಾಗಿದೆ.

ಕೆಎಲ್.ಸ್ವಾಮಿಯ ಪುತ್ರರಾದ ಬ್ರಿಡ್ಜ್ ಮೋಹನ್, ಗಿರಿಧರ್ ತಾವು ಕಡಿಮೆ ಇಲ್ಲದಂತೆ ತಮ್ಮ ಸೋದರತ್ತೆ ಮಕ್ಕಳ ಮೇಲೂ ತಮ್ಮ ಅಧಿಕಾರ ದರ್ಪ ತೋರಿದ್ದಾರೆ. ಈ ಪ್ರಕರಣದಲ್ಲಿ ಖೋಡೆಸ್ ಕಂಪನಿಯ ಫೈನಾನ್ಸ್ ಮ್ಯಾನೇಜರ್ ಚಂದ್ರಮೋಹನ್ ಭಾಗಿಯಾಗಿರುವುದು ಪತ್ತೆಯಾಗಿದೆ.
City Today News
9341997936