“ಯುವಜನರ ಸಬಲೀಕರಣ ನಿಗಮವನ್ನು ಸ್ಥಾಪಿಸಬೇಕು ಮತ್ತು ರಾಜ್ಯದಲ್ಲಿರುವ ಯುವಜನರ ಸಂಖ್ಯೆಗನುಗುಣವಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು” – ಕರ್ನಾಟಕ ಯುವ ಮುನ್ನಡೆ

ಯುವಜನರ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಯುವಜನ ಬಜೆಟ್ ಮಂಡಿಸುತ್ತಿರುವುದನ್ನು ಕರ್ನಾಟಕ ಯುವ ಮುನ್ನಡೆಯು ಸ್ವಾಗತ್ತಿಸುತ್ತಿದೆ. ಅದರ ಜೊತೆಗೆ ಯುವಜನರ ಸಬಲೀಕರಣ ನಿಗಮವನ್ನು ಸ್ಥಾಪಿಸಬೇಕು ಮತ್ತು ರಾಜ್ಯದಲ್ಲಿರುವ ಯುವಜನರ ಸಂಖ್ಯೆಗನುಗುಣವಾಗಿ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು ಎಂದು ಕರ್ನಾಟಕ ಯುವ ಮುನ್ನಡೆ ಒತ್ತಾಯಿಸುತ್ತದೆ.

ಈಗಾಗಲೆ ತಮಗೆ ತಿಳಿದಿರುವಂತೆ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ದಿ ಗುರಿಗಳ ಭಾಗವಾಗಿರುವ “ಲೀವ್ ನೋ ವನ್ ಬಿಹೈಂಡ್”ಪರಿಕಲ್ಪನೆಯಲ್ಲಿ ಯುವಜನರು ಕೂಡ ಅಭಿವೃದ್ದಿಯಲ್ಲಿ ಹಿಂದುಳಿಯಬಾರದು ಎಂಬ ಅಂಶವಿದೆ. ಹಾಗೆ ಪ್ರಸ್ತುತದ ಜಗತ್ತು ಯುವಜಗತ್ತು. ಈಗ ವಿಶ್ವದಲ್ಲಿ 15 ರಿಂದ 24 ವರ್ಷ ವಯಸ್ಸಿನ ಯುವಜನರ ಸಂಖ್ಯೆ 120 ಕೋಟಿ. ವಿಶ್ವದ ಯುವಜನರ ಪೈಕಿ 20% ಭಾರತದಲ್ಲೇ ಇದ್ದಾರೆ. ಭಾರತದ ಯುವನೀತಿಯ ಪ್ರಕಾರ 15ರಿಂದ 19 ವರ್ಷ ವಯಸ್ಸಿನ ಯುವಜನರ ಸಂಖ್ಯೆ ಈಗ ಸುಮಾರು 40 ಕೋಟಿ. ಹಾಗೂ ಕರ್ನಾಟಕದಲ್ಲಿ ಈ ವಯೋಮಾನದವರ ಸಂಖ್ಯೆ 2 ಕೋಟಿ ಇದೆ.

ಪ್ರಸ್ತುತ ಯುವಜನರು ಮಾನಸಿಕ/ದೈಹಿಕ ಆರೋಗ್ಯ, ಶಿಕ್ಷಣ, ಉದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೋವಿಡ್ ನಂತರದ ದಿನಗಳಲ್ಲಿ ಈ ಸಮಸ್ಯೆಗಳು ಮತ್ತಷ್ಟು ಹೆಚ್ಚಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಕರ್ನಾಟಕದ ಎರಡು ಕೋಟಿ ಯುವಜನರ ಸಬಲೀಕರಣಕ್ಕಾಗಿ ಯುವ ಜನರ ಸರ್ವತೋಮುಖ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಯುವಜನರ ಅಭಿವೃದ್ದಿ ನಿಗಮವನ್ನು ಸ್ತಾಪಿಸಬೇಕು. ಜೊತೆಗೆ ಮುಂಬರುವ ಯುವಜನ ಬಜೆಟ್ ನಲ್ಲಿ ಈ ಕೆಳಕಂಡ ಮುಖ್ಯ ಅಂಶಗಳಿಗೆ ಹಣ ನಿಗದಿ ಮಾಡಬೇಕಾಗಿ ಮನವಿ ಮಾಡುತ್ತೇವೆ.

 ಯುವಜನರ ಸರ್ವತೋಮುಖ ಏಳಿಗೆಗಾಗಿ 2013ರಲ್ಲಿ ಕರ್ನಾಟಕ ಸರಕಾರದ ಸಚಿವ ಸಂಪುಟದ ತೀರ್ಮಾನದಂತೆ ಯುವಜನ ಸಂಭಂದಿತ ಸೃಜನಶೀಲ ಆಲೋಚನೆಗಳು ಮತ್ತು ಯೋಜನೆಗಳಿಗೆ ಚಿಂತಕರ ಚಾವಡಿಯಾಗಿ ಕಾರ್ಯ ನಿರ್ವಹಿಸಲು ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಯುವಜನ ಕೇಂದ್ರಿತ ಕಾರ್ಯಕ್ರಮಗಳ ಮತ್ತು ಯುವನೀತಿಯ ಅನುಷ್ಟಾನ ಅಗತ್ಯಾನುಸಾರ ಪರಿಶೀಲಿಸಿ ಪುನರ್ ರಚಿಸಲು ಸಲಹೆ ನೀಡುವುದು ಮತ್ತು ಸಮನ್ವಾಯ ಸಾದಿಸಲು, ಯುವನೀತಿಯ ಅಂಗವಾಗಿ ಅನುಷ್ಟಾನ ಗೊಳ್ಳಲಿರುವ ವಾರ್ಷಿಕ ಆಯವ್ಯಯದ ಮೇಲ್ವೀಚಾರಣೆ ಮತ್ತು ಯುವಜನರ ಹಿತಕ್ಕಾಗಿ ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸರ್ಕಾರಗಳುಮತ್ತು ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ, ಸಮನ್ವಯ,ಸಹಭಾಗಿತ್ವ ಸಾಧಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸಲು,ಕಾಲಕ್ಕಾಲಕ್ಕೆ ಯುವನೀತಿ ಹಾಗೂ ಸಂಭದಿತ ವಿಷಯಗಳ ಬಗ್ಗೆ ಸರ್ಕಾರಕ್ಕೆ ಉಪಯುಕ್ತ ಶಿಫಾರಸ್ಸುಗಳನ್ನು ಮಾಡಲು ಯುವಜನ ಸಬಲೀಕರಣ ನಿಗಮ ಸ್ಥಾಪನೆಯಾಗಬೇಕು.

 ಕಾಂಪ್ರಹೆನ್ಸಿವ್ ನ್ಯಾಷನಲ್ ನ್ಯೂಟ್ರೀಷಿಯನ್ ಸರ್ವೇ 2016-18 ರ ಪ್ರಕಾರ ದೇಶದಲ್ಲಿ 20% ಯುವಜನರು(15-19 ವರ್ಷ ವಯಸ್ಸಿನವರು) ಕುಂಠಿತ ದೈಹಿಕ ಬೆಳವಣಿಗೆ ಹೊಂದಿದ್ದಾರೆ. (ಮಾಡರೆಟ್ ಸೆರ್ವೆ ಲೆಸ್ ಬಾಡಿ ಮಾಸ್ ಇಂಡೆಕ್ಸ್) ಪ್ರಕಾರ ಯುವಜನರು ರಕ್ತಹೀನತೆ, ಅನೀಮಿಯಗಳಿಂದ ಬಳಲುತ್ತಿದ್ದಾರೆ. ದೇಶದ 10ರಿಂದ 19 ವರ್ಷದೊಳಗಿನ 25% ಯುವಜನರು ಸೂಕ್ಷ್ಮ ಪೆÇೀಷಕಾಂಶಗಳಿಂದಾಗುವ ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಸರ್ಕಾರಿ/ಅನುದಾನಿತ ಕಾಲೇಜುಗಳಲ್ಲಿ ಮದ್ಯಾಹ್ನದ ಪೌಷ್ಟಿಕ ಆಹಾರ ಯೋಜನೆ ಜಾರಿಗೆ ಯನ್ನು ಯುವಜನ ಬಜೆಟ್ ಒಳಗೊಳ್ಳಬೇಕು.
 ದೇಶದಲ್ಲಿ ನಡೆಯುವ ಸುಮಾರು 40% ಆತ್ಮಹತ್ಯೆ ಪ್ರಕರಣಗಳು15 ರಿಂದ 29 ವರ್ಷದವರೆಂದು ನ್ಯಾಷನಲ್ ಕ್ರೈಂ ಭ್ಯೂರೋ ಹೇಳುತ್ತದೆ. ಯುವಜನರಿಗೆ ಮಾನಸಿಕ ಒತ್ತಡಗಳಿವೆ. ಅವುಗಳ ಪರಿಹಾರಕ್ಕಾಗಿ ಮಾನಸಿಕ ಆಪ್ತ ಸಮಾಲೋಚನೆಯ ನೆರವನ್ನು ಯುವಜನ ಬಜೆಟ್ ಒಳಗೊಳ್ಳಬೇಕು.
 ಪತಿ ವರ್ಷ ರಾಜ್ಯದ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸ್,ಎಸ್,ಎಲ್,ಸಿ ಪರೀಕ್ಶೆ ಬರೆಯುತ್ತಾರೆ ಅವರೆಲ್ಲರಿಗೂ ಪ್ರೌಡಶಾಲಾ ಹಂತದಲ್ಲಿಯೆ ಸಾರ್ವತ್ರಿಕವಾಗಿ ನುರಿತ ಆಪ್ತ ಸಮಾಲೋಚಕರ ಮೂಲಕ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ನೀಡವುದನ್ನು ಯುವಜನ ಬಜೆಟ್ ಒಳಗೊಳ್ಳಬೇಕು.
 ಕೋವಿಡ್ ನಂತರದ ದಿನಗಳಲ್ಲಿ ಡಿಜಿಟಲ್ ಡಿವೈಡ್ ಮೂರ್ತ ರೂಪದಲ್ಲಿ ಕಂಡಿದೆ.ಹಾಗಾಗಿ ಡಿಜಿಟಲ್ ಡಿವೈಡ್ ನಲ್ಲಿ ಸಿಲುಕಿರುವ ಯುವಜನರಿಗೆ ಉಚಿತ ಡಾಟ ಮತ್ತು ತಾಂತ್ರಿಕ ಪರಿಕರಗಳನ್ನು ನೀಡಬೇಕು.ಕೋವಿಡ್ ನಂತರವೂ ಶಿಕ್ಷಣ ಮತ್ತು ಮಾಹಿತಿಯಿಂದ ಹಿಂದುಳಿಯದಿರಲುಈ ಪರಿಕರಗಳನ್ನು ನೀಡಬೇಕು.
 ಕೋವಿಡ್ ಪೂರ್ವದಲ್ಲೆ 45 ವರ್ಷಗಳಲ್ಲೆ ಅತ್ಯಧಿಕವಾಗಿ 14% ಗೆ ಏರಿದ್ದ ದೇಶದ ನಿರುದ್ಯೋಗ ಪ್ರಮಾಣ ಈಗ 27% ದಾಟಿದೆ.ಹಾಗಾಗಿ ಯುವಜನರ ಉದ್ಯೋಗ ಭದ್ರತೆ ಮತ್ತು ಜೀವನೋಪಾಯಗಳ ಭದ್ರತೆ ಯುವಜನ ಬಜೆಟ್ ಒಳಗೊಳ್ಳಬೆಕು.
 ಕರ್ನಾಟಕ ಯುವ ನೀತಿ 2012 ರನ್ನು ಜಾರಿಗೆಗೊಳಿಸಬೇಕು. ಅದರಲ್ಲಿ ಸೂಚಿಸುವ ಕಾರ್ಯಕ್ರಮಗಳನ್ನು ಯುವಜನ ಬಜೆಟ್ ಒಳಗೊಂಡಿರಬೇಕು.

ಕರ್ನಾಟಕ ಯುವ ಮುನ್ನಡೆ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.