ಇಂದಿಗೆ ಸ್ಪೇನ್ ಕ್ಯಾಥೊಲಿಕ್ ದೇಶ, 711ನೇ ಇಸವಿಯಲ್ಲಿ ಮುಸ್ಲಿಂ ಸುಲ್ತಾನರು ಸ್ಪೇನ್ ದೇಶವನ್ನು ಆಕ್ರಮಿಸಿದರು , 1491ರ ತನಕ ಸ್ಪೇನ್ ಮುಸ್ಲಿಂ ಸುಲ್ತಾನರ ಕಂಟ್ರೋಲ್ ನಲ್ಲಿ ಇತ್ತು , ಕೊನೆಗೆ ಗೆರ್ರಾ ಸಾಂತ (guerra santa , ಅಂದರೆ holywar ) ನೆಡೆದು , ಮುಸ್ಲಿಂ ದೊರೆಗಳಿಂದ ಸ್ಪೇನ್ ಸ್ವತಂತ್ರ ಪಡೆಯಿತು , ಭಾರತ ದಂತೆ ಡೆಮಾಕ್ರಸಿ ಇದೆ ಆದರೆ ರಾಜ , ಇಂದಿಗೂ ಸೂಪರ್ ಪವರ್ , ಅದಕ್ಕೆ ಕಿಂಗ್ಡಮ್ ಆಫ್ ಸ್ಪೇನ್ ಎಂದೇ ಜಗತ್ತಿನಲ್ಲಿ ಕರೆಯಲಾಗುತ್ತದೆ .
ಮುಸ್ಲಿಂ ಆಳ್ವಿಕೆಯಾ ದ್ಯೋತಕವಾಗಿ, ಅಂದಲುಸಿಯಾ ರಾಜ್ಯದ ಗ್ರನಡ (granda ) ಎಂಬ ನಗರದಲ್ಲಿ Alhambra ಎನ್ನುವ ಸುಂದರ ಅರಮನೆ ಇದೆ . ಯುನೆಸ್ಕೋ ದಿಂದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಮಾನ್ಯತೆ ಪಡೆದಿದೆ . al hamara ಎನ್ನುವ ಅರೆಬ್ಬಿ ಪದದಿಂದ ಇದು alhambra ಎಂದು ಸ್ಪ್ಯಾನಿಷ್ ಜನರ ಬಾಯಿಯಲ್ಲಿ ರೂಪಾಂತರ ಗೊಂಡಿದೆ . al hamara ಎಂದರೆ ಕೆಂಪು ಎನ್ನುವ ಅರ್ಥ ಅರಬ್ಬಿಯಲ್ಲಿ , el rojo ಸ್ಪ್ಯಾನಿಷ್ ಸಮಾನರ್ಥಕ ಪದ .
ಕೇಳಿಸಿಕೊಳ್ಳಿ.. ಗೋಡೆಗೂ ಕಿವಿ ಭಾರತದಲ್ಲಿ ಮಾತ್ರವಲ್ಲ ಸ್ಪೇನ್ ನಲ್ಲೂ ಇದೆ!
2011ರಲ್ಲಿ ಸ್ಪೇನ್ ನಲ್ಲಿ ಅತಿ ಹೆಚ್ಚು ಯಾತ್ರಿಗಳನ್ನು ಪಡೆದ ಹೆಗ್ಗಳಿಕೆ ಇದರದು , ನೀವು ಇದನ್ನು ವಿಸಿಟ್ ಮಾಡುವ ಇರಾದೆ ಇದ್ದರೆ , 5/6 ತಿಂಗಳು ಮುಂಚೆ ಇಂಟರ್ನೆಟ್ ನಲ್ಲಿ ಬುಕ್ ಮಾಡುವುದು ಲೇಸು !
ಇಂತಹ ಸ್ಪೇನ್ ನಲ್ಲಿ ಮೆಜಾರಿಟಿ ಜನ ಸರಕಾರಿ ಶಾಲೆ , ಸರಕಾರಿ ಆಸ್ಪತ್ರೆ , ಪಬ್ಲಿಕ್ ಟ್ರಾನ್ಸ್ಪೋರ್ಟ್ ಉಪಯೋಗಿಸುತ್ತಾರೆ. ಕಾರನ್ನ ಕೂಡ ಕೆಲಸಕ್ಕೆ ಹೋಗಲು ಬಳಸುವರ ಸಂಖ್ಯೆ ಕೂಡ ಬಹಳಷ್ಟಿದೆ. ಪಬ್ಲಿಕ್ ಟ್ರಾನ್ಸ್ಪೋರ್ಟ್ ಅಷ್ಟು ನಿಖರ , ಫ್ರಾನ್ಸ್ , ಸ್ವಿಸ್ , ಜರ್ಮನಿ , ಇಂಗ್ಲೆಂಡ್ ನಲ್ಲಿ ಕೂಡ 1/2 ನಿಮಿಷ ಹೇಳಿದ ಟೈಮ್ ಗಿಂತ ಲೇಟ್ ಆಗಿ ಬಂದ ಉದಾಹರಣೆ ಕಂಡಿದ್ದೇನೆ. ಸ್ಪೇನ್ ಎಲ್ಲಾ ಜನರೂ ರೀತಿ ಅಂತ ಅಲ್ಲ . ಸಾಮಾನ್ಯ ಜನ ಮೆತಾಡಿಕಾಲ್. ತಮಗೆ ಒಪ್ಪಿಸಿದ ಕೆಲಸ ಶ್ರದ್ದೆ ಇಂದ ಮಾಡುತ್ತಾರೆ .
ಮಾರ್ಚ್ ತಿಂಗಳ ಕೊನೆಯ ಶನಿವಾರ ರಾತ್ರಿ ಒಂದು ಗಂಟೆ ಮುಂದಕ್ಕೆ ಹಾಕುತ್ತಾರೆ. ಅಂದರೆ ಗಮನಿಸಿ ಭಾನುವಾರ ಬೆಳಿಗ್ಗೆ ಎದ್ದಾಗ ನಿಮ್ಮ ಮೊಬೈಲ್ 7ಗಂಟೆ ಎಂದು ತೋರಿಸುತ್ತದೆ. ಆದರೆ ನಿಮ್ಮ ಕೈ ಗಡಿಯಾರ 6 ಗಂಟೆ ಎಂದು ತೋರಿಸುತ್ತದೆ . ಸೆಪ್ಟೆಂಬರ್ ತಿಂಗಳ ಕೊನೆಯ ಶನಿವಾರ ಒಂದು ಗಂಟೆ ಹಿಂದಕ್ಕೆ ಹಾಕುತ್ತಾರೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಭಾರತ-ಸ್ಪೇನ್ ನುಡುವಿನ ವೇಳೆಯ ಅಂತರ ಮೂರುವರೆ ಘಂಟೆ , ಅಕ್ಟೋಬರ್ ನಿಂದ ಮಾರ್ಚ್ , ನಾಲ್ಕೂವರೆ ಘಂಟೆ . ಈ ಕ್ರಿಯೆಗೆ ಡೇ ಲೈಟ್ ಸೇವಿಂಗ್ ಅನ್ನುತ್ತಾರೆ .
ಇಂಗ್ಲೆಂಡ್ ಮತ್ತು ಪೋರ್ಚುಗಲ್ ದೇಶಗಳ ವೇಳೆಯ ವ್ಯತ್ಯಾಸ ಭಾರತಕ್ಕೆ ಕ್ರಮವಾಗಿ ನಾಲ್ಕೂವರೆ ಘಂಟೆ , ಹಾಗು ಐದುವರೆ ಗಂಟೆ. ಹಾಗೆ ನೋಡಿದರೆ ಭೂಪಟದಲ್ಲಿ , ಸ್ಪೇನ್ ಕೂಡ ಇಂಗ್ಲೆಂಡ್ , ಪೋರ್ಚುಗಲ್ ಗೆರೆಯಲ್ಲೇ ಇದೆ. ವಸ್ತುಸ್ಥಿತಿ ಹೀಗಿದ್ದೂ ಸ್ಪ್ಯಾನಿಷರು ಜರ್ಮನಿ ವೇಳೆ ಏಕೆ ಫಾಲೋ ಮಾಡ್ತಾ ಇದ್ದಾರೆ? ಈ ಪ್ರಶ್ನೆಗೆ ಇತಿಹಾಸದಲ್ಲಿ ಅಡಗಿದೆ .
ಹಿಟ್ಲರ್ ಅಂದ ತಕ್ಷಣ ನೋಣದ ಮೀಸೆ, ಚಾರ್ಲಿಚಾಪ್ಲಿನ್ ದೇಹ, ಸ್ವಸ್ತಿಕ್ ಚಿನ್ಹೆ, ಜ್ಞಾಪಕ ಬಂತು ಅಲ್ವಾ ? ಆದರೆ ನಿಮಗೆ ಜನರಲ್ ಫ್ರಾಂಕ್ ಹೆಸರು ಕೇಳಿ ಏನಾದ್ರು ನೆನಪಿಗೆ ಬಂತಾ ? ಬಹಳ ಜನರಿಗೆ ಗೊತ್ತಿಲ್ಲ ಜನೆರಲ್ ಫ್ರಾಂಕ್ 1939 ರಿಂದ 1975 ಆತನ ಸಾವಿನವರೆಗೆ ಸ್ಪೇನ್ ನ ಸರ್ವಾಧಿಕಾರಿ ಆಗಿದ್ದ . ಫ್ರಾನ್ಸಿಸ್ಕೋ ಫ್ರಾಂಕೋ ಪೂರ್ಣ ಹೆಸರು.
ನಾವೆಲ್ಲಾ ಹೆಸರಿಗಷ್ಟೇ ಬೇರೆ ಬೇರೆ ! ನಮ್ಮ ಭಾವನೆಯ ಮೂಲ ಮಾತ್ರ ಒಂದೇ !!
ಫ್ರಾಂಕೋ , ಹಿಟ್ಲರನೊಂದಿಗೆ ಬಹಳ ಒಳ್ಳೆಯ ಸ್ನೇಹವನ್ನ ಹೊಂದಿದ್ದ. ಇಬ್ಬರದೂ ಗಳಸ್ಯ -ಕಂಠಸ್ಯ ಎನ್ನುವಂತಹ ಸ್ನೇಹ . ಹೀಗಾಗಿ ಜರ್ಮನಿ ಅನುಸರಿಸುತ್ತಿರುವ ವೇಳೆಯನ್ನ ಕಣ್ಣು ಮುಚ್ಚಿ ಅನುಸರಿಸಲು ಹೇಳುತ್ತಾನೆ . ಹೇಳಿಕೇಳಿ ಸರ್ವಾಧಿಕಾರಿ , ಇವನ ಮಾತನ್ನ ಮೀರುವುದುಂಟೆ ? ಅಂದಿನಿಂದ ಇಂದಿನವರೆಗೂ ಅವೈಜ್ಞಾನಿಕವಾಗಿ ಪ್ರಕೃತ್ತಿಯ ಮಾತು ಕೇಳದೆ ಜರ್ಮನಿಯ ವೇಳೆ ವ್ಯತ್ಯಾಸದ ನಿಯಮವನ್ನೇ ಪಾಲಿಸುತ್ತಾ ಬಂದಿದ್ದಾರೆ.
ಕೇವಲ ಒಂದು ಗಂಟೆ ಅತ್ತಿತ್ತ ಮಾಡುವುದರಿಂದ ಅದೇನು ಮಹಾ ವ್ಯತ್ಯಾಸವಾಗುತ್ತದೆ ಎಂದು ನೀವು ಕೇಳಬಹದು. ಗಮನಿಸಿ ಈ ಒಂದು ಘಂಟೆ ವ್ಯತ್ಯಾಸ ಜನರ ಬದುಕುವ ರೀತಿಯನ್ನೇ ಬದಲಿಸಿ ಬಿಟ್ಟಿತು !! ಇಂಗ್ಲೆಂಡ್ ನಲ್ಲಿ ಬೆಳಿಗ್ಗೆ 8 ರಿಂದ 9 ಅಥವಾ 9 ರಿಂದ 4ರವರೆಗೆ ಕೆಲಸ ಮಾಡುತ್ತಾರೆ. ಆದರೆ ಸ್ಪೇನ್ ನಲ್ಲಿ ಬಹುತೇಕರು 9 ರಿಂದ 1.30. ಅನನ್ತರ 4 ರಿಂದ 7.30ರ ಸಾಯಂಕಾಲದ ವರೆಗೆ ಕೆಲಸ ಮಾಡುತ್ತಾರೆ.
ಅಂದರೆ ಮಧ್ಯಾಹ್ನ ಒಂದೂವರೆಯಿಂದ ನಾಲ್ಕು ಗಂಟೆಯ ಸಮಯದಲ್ಲಿ ಊಟ ಮಾಡಿ ಒಂದು ಸಣ್ಣ ನಿದ್ದೆ ತೆಗೆಯುವುದು ಇಲ್ಲಿನ ಜನರಿಗೆ ಅಭ್ಯಾಸವಾಗಿದೆ. ಇದಕ್ಕೆ ಇಲ್ಲಿ ಸಿಯಾಸ್ತ ಎನ್ನುತ್ತಾರೆ. ಸ್ಪ್ಯಾನಿಷ್ ಸಿಯಾಸ್ತ ಎಂದು ಯೂರೋಪಿನಲ್ಲಿ , ಅಮೇರಿಕಾದಲ್ಲಿ ಇವರ ಈ ಅಭ್ಯಾಸ ಹೆಸರು ಪಡೆದಿದೆ. ತೀರಾ ಇತ್ತೀಚಿಗೆ ನಾವು ಪಾಲಿಸುತ್ತಿರುವ ವೇಳೆ ವ್ಯತ್ಯಾಸ ವೈಜ್ಞಾನಿಕವಲ್ಲ , ನಾವು ಕೂಡ ಇಂಗ್ಲೆಂಡ್ ಮತ್ತು ಪೋರ್ಚುಗಲ್ ದೇಶಗಳ ಸಮಯವನ್ನ ಅನುಸರಿಸಬೇಕು ಎಂದು ಚಿಂತಕ ಚಾವಡಿಯಲ್ಲಿ ಒಂದು ಸಣ್ಣ ಕೂಗು ಎದ್ದಿದೆ.
ಹತ್ತಾರು ವರ್ಷದಿಂದ ಜನರಿಗೆ ಹೊಂದಿಕೆಯಾಗಿರುವ ಈ ವ್ಯವಸ್ಥೆಯನ್ನ ಬದಲಾಯಿಸಲು ಮಾತ್ರ ಯಾವ ಸರಕಾರವೂ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಸ್ಪೇನ್ ಇತರ ಯೂರೋಪಿನ ದೇಶಗಳಿಗಿಂತ ಬಹಳಷ್ಟು ಬಿನ್ನ. ಇಂತಹ ಒಂದಷ್ಟು ವಿಶೇಷತೆಗಳ ಬಗ್ಗೆ ಒಂದಷ್ಟು ಇಂದು ನಿಮಗೆ ಹೇಳುವೆ.
ಪೂರ ಯುರೋಪ್ ನಲ್ಲಿ ಅತೀ ಹೆಚ್ಚು ಸಮಯ ಬಾರ್/ ರೆಸ್ಟುರಂಟ್ ನಲ್ಲಿ ಕಳೆಯುವರು ಯಾರು? ನಿಮ್ಮ ಉತ್ತರ ಸರಿಯಾಗಿದೆ. ಸ್ಪಾನಿಷರು. ಹೌದು , ಇಲ್ಲಿನ ಜನ ಬದುಕಲು ದುಡಿಯುತ್ತಾರೆ. ದುಡಿಯಲು ಬದುಕು ಅಲ್ಲ. ಪಕ್ಕದಲ್ಲೇ ಇರುವ ಇಂಗ್ಲೆಂಡ್ , ಜರ್ಮನಿ , ಫ್ರೆಂಚರು ., ಈ ವಿಷಯದಲ್ಲಿ ನತದೃಷ್ಟರು ಎಂದು ಹೇಳಬಹದು. ರಜ ಕೂಡ ಬಹಳ, ಸೇಮ್ ಭಾರತದಲ್ಲಿ ಇದ್ದಂತೆ ಬಹಳಷ್ಟು ಹಬ್ಬಗಳ ಹೆಸರೇಳಿ ರಜಾ ನೀಡುವುದು ಸಾಮಾನ್ಯ.
ಅದೇ ಭೂಮಿ, ಅದೇ ಆಕಾಶ, ನೀರು ,ಗಾಳಿ, ಆದರೂ ಮರದಿಂದ ಮರಕ್ಕೆ ಬದಲಾಗುತ್ತದೆ ಬೇರು!!
ಪಯಯ್ಯ (paella) (ಡಬ್ಬಲ್ ಎಲ್ ಇಲ್ಲಿ ಯ ಎಂದು ಉಚ್ಚಾರಣೆ ಮಾಡುತ್ತಾರೆ) ಇಲ್ಲಿನ ಆಹಾರಗಳ ರಾಜ. ಸ್ಪೇನ್ಗೆ ಬಂದು ಪಯಯ್ಯ ತಿನ್ನದೇ ಹೋದರೆ ದೇವಸ್ತಾನಕ್ಕೆ ಹೋಗಿ ಭಗವಂತನ ದರ್ಶನ ಪಡೆಯದೆ ಮರಳಿದಂತೆ! ಇಂತಿಪ್ಪ ಪಯಯ್ಯ ಸಾಮಾನ್ಯವಾಗಿ ಸಮುದ್ರ ತರಕಾರಿಯನ್ನ ಹಾಕಿ ಮಾಡುತ್ತಾರೆ. ಹಾಗೆಂದು ಸಸ್ಯಾಹಾರಿಗಳು ನಿರಾಸೆ ಹೊಂದಬೇಕಿಲ್ಲ. ವೆಜಿಟೇರಿಯನ್ ಪಯಯ್ಯ ಕೂಡ ಸಿಗುತ್ತದೆ. ಈ ಪಯಯ್ಯ , ನಮ್ಮ ಪಲಾವ್ / ಬಿರಿಯಾನಿ ಅಣ್ಣನೋ , ತಮ್ಮನೋ ಎನ್ನುವ ಶಂಕೆ ಬರುವುದು ಸಹಜ ಏಕೆಂದರೆ ಇದು ಮುಖ್ಯವಾಗಿ ಅನ್ನದಿಂದ ತಯಾರಾದ ಖಾದ್ಯ.
ಸ್ಪೇನ್ ನಲ್ಲಿ ಮಸೀದಿ ಕಟ್ಟುವ ಹಾಗಿಲ್ಲ . ಹಾಗಾಗಿ ಮೈಕು ಹಾಕುವ ಪ್ರಶ್ನೆ ಉದ್ಭವ ಆಗುವುದೇ ಇಲ್ಲ. ಪಕ್ಕದ ಇಂಗ್ಲೆಂಡ್ ನಲ್ಲಿ ಪಾಕಿಸ್ತಾನಿಯನ್ನು ಪಾಕಿ ಎಂದು ಕರೆಯುವುದು ಅಪರಾಧ ! ಆದರೆ ತಮ್ಮ ಮನೆಯಲ್ಲಿ ಅಥವಾ ಬಾಡಿಗೆಗೆ ಎಂದು ಪಡೆದ ಜಾಗದಲ್ಲಿ ಧಾರ್ಮಿಕ ನಂಬಿಕೆಗಳನ್ನ ಪೂರೈಸಲು ಅಡ್ಡಿಯಿಲ್ಲ.
ಕಳೆದ ಹತ್ತು ವರ್ಷದ ಹಿಂದಿನ ತನಕ ಮಗು ಹೆತ್ತರೆ ಯುರೋ 2,500 /- ( ೨ ಲಕ್ಷ ರುಪಾಯಿ ) ಸರಕಾರ ಇನಾಮು ಕೊಡುತ್ತಿತ್ತು . ಕಾರಣ ಇಲ್ಲಿ ಜನಸಂಖ್ಯೆ ದಕ್ಷಿಣದತ್ತ ಮುಖ ಮಾಡಿದೆ. ಅಲ್ಲದೆ ಸ್ಪೇನ್ ನಲ್ಲಿ ಸೆಕ್ಸ್ ಮಿನಿಸ್ಟ್ರಿ ಇದೆ. ಅದಕ್ಕೆ ಎಂದು ಮಿನಿಸ್ಟರ್ ಹುದ್ದೆ ಕೂಡ ಇದೆ. ಇವರ ಕೆಲಸ ಸ್ಪೇನ್ ಜನಸಂಖ್ಯೆ ಹೆಚ್ಚುವಂತೆ ನೋಡಿಕೊಳ್ಳುವುದು.
ಪಕ್ಕದ ಮನೆಯವರು ದಿನ ವಯಲಿನ್ ನುಡಿಸುವ ಶಬ್ದ ಅಸಹನೀಯ ಎಂದು ಕೇಸು ಹಾಕುತ್ತಾರೆ. ಇಲ್ಲಿನ ಕೋರ್ಟು, ವಯಲಿನ್ ವಾದಕನಿಗೆ ೧೮ ವರ್ಷ ಶಿಕ್ಷೆ ವಿದಿಸುತ್ತೆ !! ಡ್ರಗ್ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದ ನೈಜಿರಿಯನ್ ಪ್ರಜೆ 48 ಗಂಟೆಯಲ್ಲಿ ಮತ್ತೆ ರಸ್ತೆಲಿ ತನ್ನ ಇಷ್ಟದ ಸಿಗರೇಟು ಸೇದುತ್ತಾ ಹೋಗುತ್ತಾನೆ . ಹಾಲಂಡ್ ನಂತರ ಸ್ಪೇನ್ ದೇಶದಲ್ಲಿ ಮಾದಕ ದ್ರವ್ಯ ಕಾನೂನು ಇಷ್ಟೊಂದು ಸಡಿಲವಿದೆ.
ನನ್ನ ಪುಟ್ಟ ಮಗಳು ಅನನ್ಯಳ ಲಸಿಕೆ ಹಾಕಿಸಲು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಮಗು ಸಣ್ಣಗಿದೆ ಎಂದರು. ಅನ್ನಿಯನ್ನ ಸ್ಕಾಟ್ಲೆಂಡ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದೆವು. ಹೀಗಾಗಿ ಪ್ರಯಾಣದಲ್ಲಿ ಅವಳು 300/400 ಗ್ರಾಂ ತೂಕ ಕಳೆದುಕೊಂಡಿದ್ದಳು. ಮಗುವಿನ ಡಯಟ್ ಸ್ವಲ್ಪ ಹೇಳಿ ಎಂದರು. ಹೇಳಿದೆವು. ಸಾವಧಾನವಾಗಿ ನಾನು ಹೇಳಿದ್ದನ್ನ ಕೇಳಿಸಿಕೊಂಡ ಡಾಕ್ಟರ್ ಮಹಾಶಯ ನೀನು ಮತ್ತು ನಿನ್ನ ಹೆಂಡತಿ ಸಸ್ಯಾಹಾರಿ ಗಳು ಓಕೆ. ಬಟ್ ನಿನ್ನ ಮಗಳು?
ಈ ನೆಲದ ಕಾನೂನಿನ ಪ್ರಕಾರ ಎಲ್ಲಾ ತಿನ್ನಲು ಆರ್ಹಳು. ಅವಳಿಗೆ ಬುದ್ದಿ ತಿಳಿದ ಮೇಲೆ ಸಸ್ಯಾಹಾರಿಯಾಗಿ ಬದಲಾಗಬೇಕು ಎಂದು ಆಕೆಗೆ ಅನ್ನಿಸಿದರೆ ಅದು ಓಕೆ. ನೀವು ಮಗುವಿನ ಹಕ್ಕು ಕಿತ್ತು ಕೊಂಡಿದ್ದಿರಿ ನಾನು ನಿಮ್ಮ ಮೇಲೆ ದಾವೆ ಹೂಡ ಬಹುದು ಎಂದನಾತ . ಇಲ್ಲ ಮಹಾಸ್ವಾಮಿ ತಪ್ಪಾಯಿತು. ಅದೇನು ಮಾಡಬೇಕು ತಿಳಿಸಿ , ನಿಮ್ಮಾಜ್ಞೆಯನ್ನ ಶಿರಸಾವಹಿಸಿ ಪಾಲಿಸುತ್ತೇವೆ ಎಂದು ನಾನು ಮತ್ತು ರಮ್ಯ ಇಬ್ಬರೂ ಒಕ್ಕರಲಿನಿಂದ ಹೇಳಿದೆವು.
ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧವೇಕೆ ಸಾಯಬೇಕು? ಕ್ರೂಜ್ ಶಿಪ್ಪಿನ ಕಥೆ!
ಆತ ಅದ್ಯಾವುದೋ ಚಿಕನ್ ಸೂಪ್ , ಇತ್ಯಾದಿಗಳನ್ನ ಬರೆದು ಕೊಟ್ಟ. ಅವೆಲ್ಲವೂ ಮೆಡಿಕಲ್ ಸ್ಟೋರ್ ನಲ್ಲಿ ಸಿಕ್ಕವು. ತಂದು ಮೂಗು ಮುಚ್ಚಿಕೊಂಡು ಅದರಲ್ಲಿ ಹೇಳಿದ ವಿಧಾನದ ಪ್ರಕಾರ ಮಾಡಿ ಅನ್ನಿಯ ಬಾಯಿಗೆ ಇಟ್ಟರೆ ಅದು 'ತುಪುಕ್' ಅಂತ ಉಗಿಯುತ್ತಿದ್ದಳು. ತುಂಬಾ ಬಲವಂತ ಮಾಡಿದರೆ ಒಂದರ್ಧ ಗಂಟೆಯಲ್ಲಿ ವಾಂತಿ ಮಾಡಿ ಬಿಡುತ್ತಿದ್ದಳು. ನಾವು ಜೆನಿಟಿಕಲಿ ಕೋಡೆಡ್ ಮಾಂಸಾಹಾರ ನಮ್ಮದಲ್ಲ ಎಂದು ಆ ವೈದ್ಯನಿಗೆ ತಿಳಿಸಿ ಹೇಳುವುದಾದರೂ ಹೇಗೆ ?
ಕೊನೆಗೆ ನಮ್ಮ ಕೈ ಹಿಡಿದಿದ್ದು ಅಮ್ಮ ಭಾರತದಿಂದ ಮಾಡಿ ಕಳಿಸಿದ್ದ ರಾಗಿ ಸರ್ರಿ. ಮುಂದಿನ ತಪಾಸಣೆ ವೇಳೆಗೆ ಅನ್ನಿ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದಳು. ಡಾಕ್ಟಾರ್ ಮಹಾಶಯ ನಾನು ಹೇಳಿದ್ದು ಪಾಲಿಸಿದಿರಾ ? ಎಂದು ಕೇಳಿದ. ಹೌದೆಂದು ತಲೆಯಾಡಿಸಿದೆವು. ಅದಕ್ಕೆ ನೋಡಿ ಮಗುವಿನ ತೂಕ ಹೆಚ್ಚಾಗಿದೆ ಎಂದನಾತ. ನಾನು ರಮ್ಯ ಮುಖ ನೋಡಿಕೊಂಡು ಕಣ್ಣಲ್ಲೆ ನಕ್ಕೆವು.