
ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು

ಮಂಗಳವಾರ ಬೆಳಿಗ್ಗೆ, ದಿನಾಂಕ 26ನೇ ಜನೇವರಿ 2021 ರಂದು, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಹನುಮಾನ್ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂವ೯ ಮಹಾವಿದ್ಯಾಲಯದಲ್ಲಿ, 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಪಾಟೀಲ ವಕೀಲರು ನೆರವೇರಿಸಿದರು. ಸಭೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವವನ್ನು ಕುರಿತು, ಸಂಸ್ಥೆಯ ನಿದೇ೯ಶಕರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು.

ಶ್ರೀ ಹನುಮಾನ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿ ವಗ೯ ಅಧ್ಯಕ್ಷರ ನೇತ್ರೃತ್ವದಲ್ಲಿ ಮಲ್ಲನಗೌಡರಿಗೆ ಗೌರವ ಪೂರ್ವಕವಾದ ಸನ್ಮಾನ ವನ್ನು ಮಾಡಿದರು.

ಸಭೆಯಲ್ಲಿ ಸಂಸ್ಥೆಯ ನಿದೇ೯ಶಕರುಗಳಾದ ನಿಂಗನಗೌಡ ಸಿ ಪಾಟೀಲ ಹಾಗೂ ಹಿರಿಯರಾದ ನಿವ್ರೃತ್ತ ಶಿಕ್ಷಕ ನಾನಾಗೌಡ ಎಸ್ ಪಾಟೀಲ್, ಸಂಸ್ಥೆಯ ಕಾಯ೯ದಶಿ೯ ಶಿವಕಾಂತ ಎಸ್. ಚವ್ಹಾಣ, ಕಾಲೇಜಿನ ಪ್ರಾಚಾರ್ಯ ಎಸ್. ಜಿ. ಬಿರಾದಾರ, ಪ್ರೌಢಶಾಲೆ ನಿವ್ರೃತ್ತ ಮುಖ್ಯೋಪಾಧ್ಯಾಯ ಎಮ್. ಆರ್ ಚಿಂಚೋಳಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್. ವಿ. ಜೋಶಿಯವರು ಸ್ವಾಗತಿಸಿದರು. ಉಪನ್ಯಾಸಕ ರಾದ ಎಮ್. ಆರ್. ಸಿರಸಂಗೀಮಠ ವಂದನಾಪ೯ಣೆ ಮಾಡಿದರು. ಉಪನ್ಯಾಸಕರುಗಳಾದ ಆಯ್. ಎಸ್. ವೀರಘಂಟೀಮಠ, ಎಸ್. ಎಸ್. ಮೋರಟಗಿ, ಎಸ್. ಬಿ. ಮಠ, ಅತಿಥಿ ಶಿಕ್ಷಕರುಗಳಾದ ಆರ್. ಎಚ್. ರಾಮನಳ್ಳಿ, ಎಮ್. ಆರ್. ಗುಂಡದ ಹಾಗೂ ಇನ್ನುಳಿದ ಸಿಬ್ಬಂದಿ ವಗ೯ & ಗ್ರಾಮದ ಮುಖಂಡರು, ವಿಧ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಣೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ದಾಥಿ೯ಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೈಗೊಂಡರು.
City Today News
9341997936