
ನಾಡಿನ ಹೆಸರಾಂತ ಸಾಹಿತಿ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಅವರ ಕುರಿತ ಅಭಿನಂದನಾ ಗ್ರಂಥ ಲಲಿತ ಕೀರ್ತಿ ಯನ್ನು ಬಿಡುಗಡೆ ಮಾಡಲಾಯಿತು. ಸುಮಾರು 100 ಮೇರು ಕನ್ನಡ ಸಾಹಿತಿಗಳು ಮತ್ತು ಕುಟುಂಬದ ಸದಸ್ಯರು ಬರೆದ ಲೇಖನಗಳನ್ನು ಈ ಅಭಿನಂದನಾ ಗ್ರಂಥದಲ್ಲಿ ಮುದ್ರಿಸಲಾಗಿದೆ. ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಈ ಗ್ರಂಥವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಯಿತು. 13 ವಿವಿಧ ದೇಶಗಳಲ್ಲಿರುವ ಮತ್ತು ಭಾರತದ 8 ರಾಜ್ಯಗಳಲ್ಲಿರುವ ಶ್ರೀಮತಿ ಲಲಿತಮ್ಮ ನವರ ಕನ್ನಡ ಸಾರಸ್ವತ ಲೋಕದ ಗಣ್ಯರು, ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಈ ಸರಳ ಸಮಾರಂಭವನ್ನು ಆನ್ ಲೈನ್ ಮೂಲಕ ನೇರವಾಗಿ ವೀಕ್ಷಿಸಿದರು. ಅವರ ಕುಟುಂಬದ ಕೊಡುಗೆಯಾಗಿ ನಿಮಗೆ ಶೀಘ್ರದಲ್ಲಿಯೇ ಈ ಲಲಿತ ಕೀರ್ತಿ ಅಭಿನಂದನಾ ಗ್ರಂಥವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು.
City Today News
(citytoday.media)
9341997936